Friday, October 22, 2010

ನನಸಾಗುವವಳ್ಯಾರೊ?












ನಿನ್ನ ಹುಡುಕಿ-ಹುಡುಕಿ ಸುಸ್ತಾದೆ
ಆದರೂ ನಿನ್ನ ಹುಡುಕಾಟ ಜಾಸ್ತಿಯಾಗಿದೆ

ಎಲ್ಲರಲ್ಲೂ ನಿನ್ನ ಕಾಣುವ ಕೌತುಕ
ನೀ ಎಲ್ಲೂ ಕಾಣದಿರುವ ಆತಂಕ

ಈ ಹೃದಯ ಪ್ರೀತಿಯರಸಿ ಹೊರಟಿದೆ
ಪ್ರೀತಿ ಕೊಡುವೆನೆಂದ ಎಷ್ಟೊ ಹೃದಯಗಳನ್ನು ತಿರಸ್ಕರಿಸಿದೆ

ನೀನಿರುವೆಯಾದರೂ ಎಲ್ಲಿ
ತುಂಬ ಕಾಯಿಸಿ ಕಾಣಿಸಿಕೊಳ್ಳುವುದಲ್ಲವೆ ನಿನ್ನ ಖುಷಿ

          ಹೃದಯದಲ್ಲಿ ಪ್ರೀತಿಯ ಅರಮನೆಯಿದೆ. ಅರಮನೆಯ ಗೋಡೆ-ಕಂಬಗಳಲ್ಲಿ ಪ್ರೇಯಸಿಯ ಗುಣಗಾನವಿದೆ. ಅಲ್ಲಲ್ಲಿ ತುಂಬ ತೇಜಸ್ಸು. ಅದು ಪ್ರೀತಿ ದೇವತೆಯ ಮಂದಿರ. ಅರಮನೆ ಅಲಂಕೃತಗೊಂಡಿದೆ. ಪ್ರೇಯಸಿಯ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರೀತಿ ದೇವತೆಯ ಆಶೀರ್ವಾದವಿದೆಯೆಂಬ ದೃಢ ನಂಬಿಕೆ. ಆಗಾಗ ನನ್ನ ಪ್ರೇಯಸಿ ನಗುಮೊಗದಿಂದ ಬರುತ್ತಿರುವಂತೆ ಕನಸು. ನಾಚಿಕೆಯಿಂದ ಅರಮನೆಯ ಹೂದೋಟದಲ್ಲೆ ಕುಳಿತಿರುವಳೇನೊ, ಹೂರಾಶಿಯ ಪರಿಮಳ ಆಕೆಯನ್ನು ಸೆಳೆಯಿತೇನೊ, ನೀರಿನ ಬುಗ್ಗೆ ತನ್ನ ಹನಿಯನ್ನು ಪ್ರೇಯಸಿಯೆಡೆ ಚಿಮ್ಮಿಸಿ ಅತ್ತ ಕಡೆ ಆಮಂತ್ರಿಸಿತೇನೊ, ಹಳ್ಳ-ಕೊಳ್ಳಗಳ ಹರಿವಿನ ನಿನಾದ ಆಕೆಯ ದಿಕ್ಕು ತಪ್ಪಿಸಿತೇನೊ ಎಂಬೆಲ್ಲ ಭ್ರಮೆ. ಪ್ರೀತಿಯರಮನೆಯ ಗೋಡೆ-ಕಂಬಗಳು ಸೂಚಿಸುವ ಪ್ರೇಯಸಿಯ ಗುಣಗಾನ ಮಾಡುತ್ತ ಕಾಲ ಕಳೆಯುತ್ತಿದೆ. ಕನಸಿನ ರಾಣಿಯ ಮೇಲೆ ಅದೆಷ್ಟು ನಿರೀಕ್ಶೆ! ಅದೆಷ್ಟು ಗುಣಗಾನ  ಮಾಡಬಹುದು.

          ಈಗೆಲ್ಲ ಇಂತವರೆಲ್ಲಿ ಸಿಗುತ್ತಾರೆಯೆಂದು ಗೋಡೆಯ ಮೇಲೆ ಬರೆದಿರುವ ಗುಣಗಾನವನ್ನು ಒಂದೊಂದಾಗಿ ಅಳಿಸುವ ಕೆಲಸ ಶುರುವಾಗಿದೆ. ವರ್ಣರಂಜಿತ ಬಣ್ಣಗಳು ಪ್ರೇಯಸಿಯ ಮೇಲಿರುವ ನಿರೀಕ್ಷೆಗೆ ಸಾಕ್ಷಿಯಾಗಿದ್ದ ಬರಹಗಳ ಮೇಲೆ ಕುಳಿತು ಗೋಡೆಯ ಮೆರುಗನ್ನು ಹೆಚ್ಚಿಸಿವೆ. ಈಗೇನೊ ಕನಸಿನ ರಾಣಿಯೆಂದು ಹೇಳುತ್ತಿರುವೆ. ಮುಂದೆ ನನಸಾಗುವವಳ್ಯಾರೊ? ಹೃದಯದರಮನೆಯ ಗೋಡೆ-ಕಂಬಗಳು ಸಂಪೂರ್ಣ ವರ್ಣರಂಜಿತವಾಗದೆ ಒಂದೆರಡು ಗುಣಗಾನಗಳು ಶಾಶ್ವತವಾಗಿ ಉಳಿದರೆ ನಮ್ಮ ಮೊಗದಲ್ಲಿ ಆಗಾಗ ನಗುವಿನ ಹೂವು ಅರಳಬಲ್ಲದಲ್ಲವೆ?

3 comments:

  1. ಅಪ್ಪಂಗೆ ಹೇಳವ? ಅಮ್ಮಂಗ ಹೇಳವ? ಅಥವಾ ಅಣ್ಣಂಗೆ ಲಗೂ ಲೈನ ಕ್ರೀಯರ ಮಾಡು ಹೇಳವ?
    ತಲೇ ಬಿಶಿ ಬಾಡಡ ಮಾಣಿ. ಸುಮ್ಮನೆ ಓದ್ಯಕ್ಯ. ಎಲ್ಲ ನನಸಾಗ್ತು!

    ReplyDelete
  2. ha ha.. bachelor ಮನಸಲ್ಲಿ ಹಿಂಗಿದ್ದೆಲ್ಲ ಇರ್ತಲ

    ReplyDelete
  3. ಹೀಂಗೆ ಹೆಳಿದ್ದೆ ಹೇಳಿ ಬರೆಯದೇ ಬಿಟ್ಟು ಬಿಟ್ಯ ಎಂತ ಮಾಣಿ?

    ReplyDelete