Sunday, October 17, 2010

ಪ್ರೀತಿ-ಪ್ರೇಮ


ಪ್ರೀತಿ-ಪ್ರೇಮ ಎಂದಾಗ ಹುಡುಗರಿಗೆಲ್ಲ ತಮ್ಮ ಡ್ರೀಮ್ ಗರ್ಲ್ ಹಾಗೂ ಹುಡ್ಗೀರ್ಗೆಲ್ಲ ತಮ್ಮ ಡ್ರೀಮ್ ಬಾಯ್ ನೆನಪಾಗೋದು ಸಹಜ. ಹಾಲಿವುಡ್ ನಲ್ಲಾಗಲಿ ಬಾಲಿವುಡ್ ನಲ್ಲಾಗಲಿ ಕನಸಿನ ಪ್ರಿಯತಮೆಯಿದ್ದರೆ, ಕೈಗೆ ಸಿಗದ ತಾರೆಯನ್ನು ಮುಟ್ಟುವ ಪ್ರಯತ್ನ ಯಾರೂ ಮಾಡಲಾರರು. ಮಿನುಗುವ ತಾರೆ ದೂರದಿಂದ ಮಾತ್ರ ಸುಂದರವಲ್ಲವೆ! ಹಾಗಾದರೆ ಕೈಗೆಟುಕುವ ಈ ಪ್ರೀತಿ-ಪ್ರೇಮದ ಅನುಭವ ಎಷ್ಟು ಸುಂದರ? ಅದರೊಡಗೂಡಿ ಮೂಡುವ ಮುಂದಿನ ಜೀವನ ಹೇಗಿರಬಹುದು? ನಮ್ಮ ಸುತ್ತ-ಮುತ್ತ ನಾವೆ ಬಯಸಿ ಸಿಗುವ ಪ್ರೀತಿಯ ಬಂಧನ ಶಾಶ್ವತವೆ? ಅಂತಹ ಅನುಪಮ ಶಾಶ್ವತ ಪ್ರೀತಿಯ ಹುಡುಕಾಟದಲ್ಲಿ ಪ್ರತಿಯೊಬ್ಬನೂ ಒಂದಲ್ಲ ಒಂದು ಬಾರಿ ತೊಡಗಿರುತ್ತಾನೆ. ಈ ಸಮಯದಲ್ಲಿ ಆಗಬಹುದಾದ ಸರಿ-ತಪ್ಪುಗಳನ್ನು ಅವಲೋಕಿಸತೊಡಗಿದಾಗ ನನ್ನ ಮನಸಿಗೆ ಬಂದ ಸಾರಾಂಶವನ್ನು ಈ ಬ್ಲಾಗ್ ನಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದೇನೆ.


        ನಮ್ಮನ್ನು ಸಾಮಾನ್ಯವಾಗಿ ಆಕರ್ಷಿಸುವುದು ಸೌಂದರ್ಯ, ಸಾಧನೆ, ಐಶ್ವರ್ಯ. ಪ್ರೀತಿಯ ಮಳೆಹನಿಗೆ ಮಾತುಗಳೂ ಮೋಡವಾಗಬಹುದು. ಕೆಲವೊಬ್ಬರು, ನಾವು ಬಾಳುವುದು ವ್ಯಕ್ತಿಯ ವ್ಯಕ್ತಿತ್ವದ ಜೊತೆ ಎನ್ನುವುದನ್ನು ಮರೆತು ಬಿಡುತ್ತಾರೆ. ಆ ಸತ್ಯವನ್ನು ಒಂದೊಂದು ಬಾರಿ ಕಣ್ಮುಚ್ಚಿ ನೆನೆದುಕೊಳ್ಳುವ ಅವಶ್ಯಕತೆಯಿರುತ್ತದೆ. ಯಾಕೆಂದರೆ ಪ್ರೀತಿ-ಪ್ರೇಮದ ಬಲೆಗೆ ಸಿಕ್ಕ ಮೇಲೆ ಹೊರಬರುವುದು ಕಷ್ಟವಾಗಲೂಬಹುದು. ಅಂತಹ ಬಂಧನವನ್ನು ಮನಸಾರೆ ಇಷ್ಟ ಪಡಬೇಕೆ ಹೊರತು ಇಷ್ಟ ಪಡುವುದು ಅನಿವಾರ್ಯವಾಗಬಾರದಲ್ಲವೆ. ವ್ಯಕ್ತಿಯ ವ್ಯಕ್ತಿತ್ವವನ್ನು ಆತನ/ಆಕೆಯ ಸೌಂದರ್ಯ, ಸಾಧನೆ, ಐಶ್ವರ್ಯ, ಕೌಟುಂಬಿಕ ಹಿನ್ನೆಲೆಗಳು ಖಂಡಿತವಗಿಯೂ ಪ್ರಭಾವ ಬೀರುತ್ತವೆ. "ನಮಗೆ ಅನುರೂಪವಾದ ವ್ಯಕ್ತಿತ್ವದ ಆಯ್ಕೆಗೆ, ನಮ್ಮ ವ್ಯಕ್ತಿತ್ವದ ಅರಿವು ಸಾಕಾಗಬಲ್ಲದು" ಎನ್ನುವುದು ನನ್ನ ಅಭಿಪ್ರಾಯ. ಎಲ್ಲರೂ ತಮಗೆ ಅನುರೂಪವಾದ ವ್ಯಕ್ತಿತ್ವವನ್ನು ಪ್ರೀತಿಸಲಿ, ಪ್ರೀತಿಯ ಬಂಧನ ಶಾಶ್ವತವಾಗಲಿ.


        ಪ್ರೀತಿ-ಪ್ರೇಮ, ಜೀವನ ಇಂತಹ ವಿಷಯಗಳಲ್ಲಿ ನಾನೇನು ಅನುಭವಿಯಲ್ಲ. ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಮನಸಿನ ಮಾತುಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.

3 comments:

  1. ಹೇ ಯಾವಾಗ ಶುರು ಮಾಡಿದ್ಯೋ ಬ್ಲಾಗ? ಒಳ್ಳೇದು. ಚಂದ ಬರೀತೆ ಮಾರಾಯ; ಹೇಂಗೆ ಬರೀತಾ ಇರು. ಆದರೆ ಅನುಭವವೇ ಇಲ್ಲೇ ಹೇಳ್ತೆ; ಅನುಭವ ಿದ್ದವರ ಹಾಂಗೆ ಬರೀತೆ. ಮೊದಲನೇದ ನಂಬವ? ಎರಡನೇದ ನಂಬವ?

    ReplyDelete
  2. "ನಮಗೆ ಅನುರೂಪವಾದ ವ್ಯಕ್ತಿತ್ವದ ಆಯ್ಕೆಗೆ, ನಮ್ಮ ವ್ಯಕ್ತಿತ್ವದ ಅರಿವು ಸಾಕಾಗಬಲ್ಲದು" sakkttagi baradde.. girish... nice writing...

    ReplyDelete
  3. Thank u balana and Vanishri.
    @Balana.. ಮೊದಲನೇದು ನಂಬಲೇಬೇಕು. ಎರಡನೇದು ನಿಂಗ ಹೇಳವು.

    ReplyDelete