ಇಲ್ಲಿ ನಾನು ಬರೆಯುತ್ತಿರುವುದೆಲ್ಲ ನನ್ನ ಮನಸಿಗೆ ಅನ್ನಿಸಿದ್ದು, ನಾನು ತಿಳಿದುಕೊಂಡದ್ದು. ಇಲ್ಲಿಯ ಮಾತುಗಳನ್ನೆಲ್ಲ ನೀವು ನನ್ನ ಜೀವನ ಶೈಲಿಯಲ್ಲಿ, ನಡತೆಯಲ್ಲಿ ಕಾಣಬಹುದೇನೊ. ನನ್ನ ಮನಸಿನ ಆಳದಲ್ಲಿರುವ ವಿಚಾರಗಳನ್ನೆಲ್ಲ ಹುಡುಕುತ್ತ ಬರೆದಿರುವ ನನ್ನ "ಮನಸಿನ ಮಾತು" ಈ ಬರಹ.
ಜೀವನ ಮತ್ತು ಅದರ ಮೌಲ್ಯಗಳ ಕುರಿತೆಲ್ಲ ಮಾತನಾಡುವ ಪ್ರಬುದ್ಧ ವಯಸ್ಸು ನನ್ನದಲ್ಲ. ಆದರು ಕೂಡ ಚಿಕ್ಕ- ಪುಟ್ಟ ಅನುಭವಗಳ ಸುತ್ತ ಬರುವ ಚಿಂತನೆಗಳನ್ನು ನಾವು ಅನುಭವಿಸಿದರೆ ಧನಾತ್ಮಕ ಬೆಳವಣಿಗೆ ಕಂಡು ಬರಬಹುದಲ್ಲವೇ. ನಮ್ಮ ಈ ಪಯಣ ಎಷ್ಟೊಂದು ಸೋಲು-ಗೆಲುವುಗಳಿಂದ ತುಂಬಿರುತ್ತದೆ. ನಮಗಾಗುವ ಪ್ರತಿಯೊಂದು ಸೋಲು-ಗೆಲುವಿಗೂ ನಾವೇ ಹೊಣೆಯಲ್ಲವೆ. ನಮ್ಮ ಒಂದು ಗೆಳೆತನದಲ್ಲಿ ಮೋಸವಾದರೆ ಗೆಳೆತನ ಬಯಸಿದ ನಾವೇ ಮೂರ್ಖರಲ್ಲವೆ. ಇಂತಹ ಒಂದು ಪ್ರಮಾದದಿಂದ ಎಷ್ಟೊಂದು ನಾವು ಮನ ನೊಂದುಕೊಳ್ಳುತ್ತೇವೆ. ಹಾಗಾದರೆ ಮನುಷ್ಯನ ಒಳ್ಳೆತನ, ಪ್ರಾಮಾಣಿಕತೆಯನ್ನು ಅಳೆಯುವ ಮಾಪನದ ಸಂಶೋಧನೆ ನಡೆಯಬೇಕೆ?
ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ-ತಾಯಿಯು ತಮ್ಮ ಮಕ್ಕಳಿಗೆ ಶಿಷ್ಟಾಚಾರವನ್ನು ಕಲಿಸುತ್ತಾರೆ. ನನಗನ್ನಿಸುವ ಪ್ರಕಾರ "ನೀವೇನಾದ್ರು ನನ್ನಲ್ಲಿ ಒಳ್ಳೆತನವನ್ನು ಕಂಡರೆ ಅದು ನನ್ನ ಅಪ್ಪ-ಅಮ್ಮ ಕಲಿಸಿದ್ದು. ನನ್ನಿಂದ ಏನಾದ್ರು ಪ್ರಮಾದ ನಡೆದು ಹೋದರೆ ಅದು ನಾನು ಬೆಳೆಸಿಕೊಂಡ ಗುಣ". ನಾನು ಅನೇಕ ಬಾರಿ ನನ್ನ ಮನೆಯವರು, ನಾನು ಹುಟ್ಟಿ-ಬೆಳೆದ ಊರು, ನನ್ನ ಎಷ್ಟೋ ಜನ ಬಂಧು-ಬಳಗ, ಗೆಳೆಯರನ್ನು ನೆನೆದುಕೊಂಡು ನಾನು ನಿಜವಾಗಿಯೂ ಪುಣ್ಯವಂತ ಎಂದು ಸಂತೋಷ ಪಟ್ಟಿದ್ದೇನೆ. ಎಲ್ಲ ಹೇಳುವಂತೆ ಮುಖ-ಮಾತು ಮನಸ್ಸಿನ ಕನ್ನಡಿಯಂತೆ. ಆದರು ನಿಜವಾದ ಮನುಷ್ಯನ ಆಂತರ್ಯದ ಅರಿವಾಗುವುದು ಒಡನಾಟದಿಂದ ಹಾಗು ಅವನ ಸೂಕ್ಷ್ಮ ವೀಕ್ಷಣೆಯಿಂದ ಮಾತ್ರ ಎನ್ನುವುದು ನನ್ನ ಭಾವನೆ.
ನನಗೆ ಪ್ರತಿಯೊಬ್ಬನ ಮನಸ್ಸನ್ನು ಅರಿಯುವ ಕುತೂಹಲವಿದೆ. ವಿಶ್ವದ ಎಲ್ಲ ರೀತಿಯ ಮನುಷ್ಯರ ಜೀವನ ಶೈಲಿಯನ್ನು ತಿಳಿದುಕೊಳ್ಳುವ ಹಂಬಲವಿದೆ.ನನ್ನೀ ಜೀವನಕ್ಕೊಂದು ಅಡಿಪಾಯ ಹಾಕಿಕೊಂಡು ನನ್ನ ಕನಸನ್ನು ಸಾಕಾರಗೊಳಿಸುವತ್ತ ಪಯಣ ಬೆಳೆಸಲು ಮುಂದಾಗುತ್ತೇನೆ. ನಮಗೆ ಸಿಗುವ ಖುಷಿ ಸುಖವೆಲ್ಲ ನಮ್ಮ ಪ್ರಾಮಾಣಿಕ ಪ್ರಯತ್ನಗಳ ಫಲಶ್ರುತಿಯೆಂದು ನಾವು ನಡೆದು ಬಂದ ದಾರಿಯ ಸೂಕ್ಷ್ಮಾವಲೋಕನದಿಂದ ತಿಳಿದು ಬರುತ್ತದೆ. ನಾನೊಬ್ಬ ಬರಹಗಾರನಲ್ಲ. ನನ್ನ ಮನಸ್ಸಿನ ಭಾವನೆಗಳನ್ನು ಕೆದಕುತ್ತ ಬರೆದಿರುವ ಈ ಬರಹದಲ್ಲಿ ಒಂದು ಮಾದರಿ ಲೇಖನದ ಗುಣಲಕ್ಷಣಗಳು ಇಲ್ಲದಿರಬಹುದು. ನನ್ನ ಮೊದಲ ಬ್ಲಾಗ್ ನಲ್ಲಿ ನನ್ನ ಕೆಲವು ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಿದ್ದೇನೆ. ಮುಂದಿನ ಬ್ಲಾಗ್ ಗಳಲ್ಲಿ ಕೆಲವೊಂದು ಪ್ರವಾಸದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
keep writing...
ReplyDeleteನೆನಪುಗಳ ಮಾತು ಮಧುರ,ಸುಮಧುರ. ಈ ಲೇಖನದ ವಿಚಾರ ಧಾರೆ ಹೃದಯಸ್ಪರ್ಶಿ. ಅದನ್ನು ಅಭಿವ್ಯಕ್ತಿಸಿದ ರೀತಿ ಮುಸ್ಸಂಜೆಯ ತಂಗಾಳಿಗಿಂತ, ಬೇಸಿಗೆಯಲ್ಲಿನ ವರ್ಷಧಾರೆಗಿಂತ,ಪ್ರೇಯಸಿಯ ಸಿಹಿ ಚುಂಬನಕ್ಕಿಂತ ಮನಸ್ಸಿಗೆ ಮುದವನ್ನು ನೀಡುತ್ತದೆ. 'ಸಾಗರಂ ಸಾಗರೋಪಮಹ'(ಸಾಗರಕ್ಕೆ ಸಾಗರವೇ ಸಾಟಿ) ಅಂತೆಯೇ ಸಾಯಿಮನೆಗೆ ಸಾಯಿಮನೆಯೇ ಸರಿಸಾಟಿ.
ReplyDeleteNice Giri...I will read all the updates..I like freshness in the language...
ReplyDeletehay...Girish...I really like it very much..its soo nice..i like u r thoughts...Keep writing..i ll definetly read it..
ReplyDeletethank u all
ReplyDelete